
ಫೆಬ್ರವರಿ 22 ನೇ ಶನಿವಾರ ಸಂಜೆ ದುಬೈ ಡೌನ್ ಟೌನ್ ನ ಪಂಚತಾರಾ ಹೋಟೆಲ್ ಪುಲ್ಲ್'ಮನ್ ನಲ್ಲಿ ಅಲ್ ಮಿರಾತ್ ರಿಯಲ್ ಎಸ್ಟೇಟ್ಸ್ 2025 ರ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿತು.
ಮುಖ್ಯ ಅತಿಥಿಯಾಗಿ ಮಾನ್ಯ ಅಬ್ದುಲ್ಲ ಅಹಮದ್ ಶಿಝಾವಿ (Chairman of Total Building Contracting) ಯವರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ದುಬೈ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಿರಾತ್ ನ ಕೊಡುಗೆ ಪ್ರಶಂಶನೀಯ, ಸಂಸ್ಥೆಯು ಈ ಮಟ್ಟಕ್ಕೆ ಸಾಧನೆಗೈಯಲು ಮಾಲಕರ ಅನುಭವೀಯ ಮಾರ್ಗದರ್ಶನ ಹಾಗೂ ಉದ್ಯೋಗಿಗಳ ಟೀಂ ವರ್ಕ್ ಮೂಲ ಕಾರಣ ಎಂದರು. ಮುಂದಿನ ವರ್ಷಗಳಲ್ಲಿ ದುಬೈ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಿರಾತ್ ಉತ್ತಮ ಪ್ರಗತಿಯನ್ನು ಸಾಧಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅಬ್ದುಲ್ ರಹಿಮಾನ್ ರನ್ನು 2024 ರ BEST PERFORMER, ಅಹಮದ್ ಕಬೀರ್ ರನ್ನು RISING STAR, ಅಶ್ರಫ್ ಅಹಮ್ಮದ್ ರನ್ನು EMPLOYEE OF THE YEAR ಹಾಗೂ ಮೊಹಮ್ಮದ್ ರಿಝ್ವಾನ್ ರನ್ನು OUTSTANDING FEEDBACK ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಮಿರಾತ್ ರಿಯಲ್ ಎಸ್ಟೇಟ್ ನ ಚೇರ್ಮನ್ ಶ್ರೀ ಸಾದಿಕ್ ಅಲಿ ಯವರು ಮಾತನಾಡಿ ರಿಯಲ್ ಎಸ್ಟೇಟ್ ನ ಹೂಡಿಕೆಗೆ ದುಬೈ ಅತ್ಯುತ್ತಮ ಮಾರುಕಟ್ಟೆಯಾಗಿದೆ. 2024 ರಲ್ಲಿನ ಆಸ್ತಿ ಖರೀದಿದಾರರಲ್ಲಿ 51% ಭಾರತೀಯರು ಮಾತ್ರವಲ್ಲ ಆ ವರ್ಷ 760 ಬಿಲಿಯನ್ ದಿರಾಮ್ ನ ದಾಖಲೆಯ ಪ್ರಾಪರ್ಟಿ ವಹಿವಾಟು ನಡೆದಿದೆ ಎಂಬ ಮಾಹಿತಿಯನ್ನು ನೀಡಿದರು. ನಮ್ಮ ಸಂಸ್ಥೆಯು ಉತ್ತಮ ಹಾಗೂ ಗುಣಮಟ್ಟದ ಸೇವೆಗೆ ಗ್ರಾಹಕರ ಪ್ರಶಂಸೆಗೆ ಪಾತ್ರವಾಗಿದೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾನ್ಯ ಮೊಹಮ್ಮದ್ ಅಬ್ದುಲ್ರಹೀಮ್ ಮೊಹಮ್ಮದ್ ಎ ಅಲಹಮ್ಮದ್, ಮಾನ್ಯ ಯಾಸರ್ ಅಬ್ದುಲ್ಲ ಅಬ್ದುಲ್ ಖಾದರ್ ರವರು ಭಾಗವಹಿಸಿದ್ದರು.
ಅಬ್ದುಲ್ಲಾ ಹಮ್ದಾನ್ ಸಂಸ್ಥೆಯ ವಾರ್ಷಿಕ ವರಧಿಯನ್ನು ಮಂಡಿಸಿದರು, ಅತಿಥಿಗಳ ಸ್ವಾಗತ ಹಾಗೂ ಧನ್ಯವಾದವನ್ನು ರಿಧಾನ್ ರಶೀದ್ ನೆರವೇರಿಸಿದರು. ರಿಝ್ವಾನ್ ಕಾರ್ಯಕೃಮ ನಿರೂಪಿಸಿದರು.


















Comments
Add new comment